Friday, December 3, 2010

Vishnu sahasranama 756-760

ವಿಷ್ಣು ಸಹಸ್ರನಾಮ:
ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ
756) ಸುಮೇಧಾಃ
'ಮೇಧಾ' ಎಂದರೆ ವಿಷಯಗಳನ್ನು ಮರೆಯದೆ ನೆನಪಿಟ್ಟುಕೊಳ್ಳುವ ಶಕ್ತಿ. ಕೇವಲ ಒಂದು ಜನ್ಮದ ವಿಷಯವಲ್ಲದೆ, ಜನ್ಮಜನ್ಮಾಂತರದ ವಿಷಯವನ್ನು ಕೂಡಾ ಸ್ಮರಣೆ ಮಾಡಿಕೊಳ್ಳುವ ಶಕ್ತಿ ಮೇಧಾವಿಗಳಿಗಿರುತ್ತದೆ.  ಭಗವಂತ ಎಂದೂ ಮರೆಯದ ಅರಿವಿನ ಕಡಲು. ಅನಂತ ಕಾಲದ ಸಂಪೂರ್ಣ ಸ್ಮರಣಶಕ್ತಿಯುಳ್ಳ ಭಗವಂತ ಸುಮೇಧಾಃ.
757) ಮೇಧಜಃ
'ಮೇಧ' ಎಂದರೆ ಭಗವಂತನನ್ನು ಕುರಿತು ಮಾಡುವ ಯಜ್ಞ(ಉದಾ: ಅಶ್ವಮೇಧ). ಯಜ್ಞಗಳಿಂದ ವ್ಯಕ್ತನಾಗುವ ಭಗವಂತ ಮೇಧಜಃ.
758) ಧನ್ಯಃ
'ಧನ' ಎಂದರೆ ಸಂಪತ್ತು. ದುಡ್ಡು ನಿಜವಾದ ಧನವಲ್ಲ! ಯಾವುದನ್ನು ಹಂಚಿದಾಗ ಖರ್ಚಾಗುವುದಿಲ್ಲವೋ ಅದು ನಿಜವಾದ 'ಧನ' (ಉದಾ: ಗುಣ, ಜ್ಞಾನ). ನಿರಪೇಕ್ಷನೂ ಗುಪೂರ್ಣನೂ ಆದ ಭಗವಂತ ಧನ್ಯಃ.
759) ಸತ್ಯಮೇಧಾಃ
ತಪ್ಪು ತಿಳುವಳಿಕೆಗಳಿಲ್ಲದ ಯಥಾರ್ಥವಾದ ಅರಿವಿನ ಮೂರ್ತಿ  ಭಗವಂತ ಸತ್ಯಮೇಧಾಃ.
760) ಧರಾಧರಃ
ಈ ಧರಿತ್ರಿಯನ್ನು ಹೊತ್ತ ಶೇಷಶಾಯಿ ಭಗವಂತ
ಧರಾಧರಃ.

No comments:

Post a Comment